'ಜೂಲು' ಹೆಸರಲ್ಲೇ ಏನೋ ಒಂದ್ ತರ ಮೋಡಿ, ರಾಜ ಗಾಂಬಿರ್ಯದ ನಡಿಗೆ, ಕಟ್ಟು ಮಸ್ತಾದ ಮೈಕಟ್ಟು, ಉದ್ದನೆಯ ಡೊಂಕು ಬಾಲ(ಅದ್ನ ಏನು ಹೇಳ್ಬೇಕಾಗಿರ್ಲಿಲ್ಲ ಅನ್ಸುತೆ ಇರ್ಲಿ), ಇದು ನಮ್ಮ ಅಜ್ಜಿ ಮನೆ ನಾಯಿಯ ಬ್ರೀಫ್ ಇಂಟ್ರೋಡಕ್ಶನ್.
ಅದ್ಯಾಕೋ ಹುಟ್ಟಿ ಕಣ್ಬಿಟ್ಟು ೪ - ೫ ದಿನ ಚೆನ್ನಾಗಿ ಅಡ್ಕಂಡ್ ಇದ್ದಿದು ಇದ್ದುಕಿದ್ದಂಗೆ ಡಲ್ ಅಗ್ಬಿಟ್ಟಿತ್ತು, ಊಟ, ಹಾಲು ಏನು ತಿನ್ತ ಇಲ್ಲ, ಹೋ ಇದ್ ಇನ್ನ ಬದಕದಿಲ್ಲ ಇಂತ ಎಲ್ಲ ಅಸೆ ಬಿಟ್ಟಾಯ್ತು. ಕೊನೆಗೆ ನಮ್ ಅಮ್ಮ ಅದೇನೋ ಹಳೆ ಗ್ಯಾಸ್ಟ್ರಿಕ್ ಔಷಿದಿನ ಕುಡ್ಸಿದ್ದೆ ತಡ ಮಾರನೆ ದಿನ ಹುಷಾರು ಆಗ್ಬಿಡ್ತು.(ಆ ಔಶಿದಿ ತಯಾರಕರು ಅಮೃತ ಫಾರ್ಮಸೆಟಿಕಲ್ಸ್:))
ಆದರು ಕೆಲವು ಸಾರಿ ಮಳೆಗಾಲ ಅಂದ್ರೆ ಅದ್ಕೆ ಏನೋ ಅಲರ್ಜಿ, ಡಲ್ ಆಗಿ ಬಿಡೋದು...ಪಕ್ಕದ ಮನೆ ಅಜ್ಜ ಅನಂತಯ್ಯ ಈ ಸಾರಿ ಮಳೆಗಾಲ ದಾಟಲ್ಲ ನಿಮ್ ಜೂಲ ಅಂತ ಪ್ರತಿ ಸಲ ಹೇಳಿ ಹೇಳಿ ಪಾಪ ಒಂದ್ ಮಳೆಗಾಲದಲಿ ಅವ್ರೆ ತೀರ್ಕೊಂಡ್ ಬಿಟ್ರು.
ನಮ್ಮನೆ ಇಂದ ೮ ಕಿ ಮೀ ಅಷ್ಟೇ ಇರೋದು ಅಜ್ಜಿ ಮನೆಗೆ, ಸುಮಾರು ೨ ಕಿ.ಮೀ ಗುಡ್ಡ ಬೆಟ್ಟಗಳ ಕಾಡು ದಾರೀಲಿ ನಡ್ಕಂಡ್ ಹೋಗ್ಬೇಕು, ಆ ದಾರೀಲಿ ನಡ್ಕಂಡ್ ಹೋಗದೆ ಒಂದ್ ಮಜಾ ಯಾವತ್ತು, ಸುಸ್ತು ಅನ್ಸೆ ಇಲ್ಲ (ಯಾಕಂದ್ರೆ ಅದು ಅಜ್ಜಿ ಮನೆ ದಾರಿ:))
ಪ್ರತಿ ಸರಿನು ಇನ್ನೇನು ಗೇಟು ತಗ್ದು ಅಂಗಳಕೆ ಹೋಗ್ಬೇಕು, ಆಗ್ಲೇ ರೆಡಿ, ಕೈ ಕಾಲು ಎಲ್ಲ ಒಂದ್ ಸರಿ ನೆಕ್ಕಿ, ಒಂದ್ ವಿಷಲ್ ಹಾಕಿ ಸುಸ್ವಾಗತ ಹೇಳೋನು.
ಒಂದ್ ಸರಿನಾದ್ರು ಜೂಲು ಬಗ್ಗೆ ಮಾತನಾಡದ ದಿನನೇ ಇರ್ತಿರಿಲ್ಲಿಯ. ಸುಮಾರ್ ಸರಿ ಜೂಲನ ನೋಡಕೆ ಅಂತಾನೆ ಅಜ್ಜಿ ಮನೆಗೆ ಹೋಗಿದ್ದು ಉಂಟು.
ಬಹಳ ಚಿಕ್ಕ ವಯಸಲ್ಲೇ ಪಾಪ ದುಶ್ಚಟಕೆ ಬಲಿಯಾಗಿ ಬಿಟ್ಟ, ದಿನಕೆ ೨ ರಿಂದ ೩ ಬೀಡಿ ತಿನ್ನೋನು(ಸೇದಿ ಬಿಸಾಕಿದ ತುಂಡು ಆಮೇಲೆ ಅದರ ಬೂದಿ) ಅದ್ನ ತಿಂದು ಹಾಗೆ ಬಿಸಿಲಲ್ಲಿ ಮಲಗಿದ ಅಂದ್ರೆ ಪಕ್ಕದ ಮನೆ ಬುಟ್ಟು(enemy) ಗುರ್ರ್ರ್ ಅಂತ ಬಂದಾಗಲೇ ಸರಿ ಇವ ಏಳದು. ಅಷ್ಟೇ ಅಲ್ಲ ಒಳ್ಳೆಯ ಹಾಡುಗಾರ ಕೂಡ, ಯಾರಾದ್ರೂ ಹಾಡ್ ಹೇಳಕೆ ಸ್ಟಾರ್ಟ್ ಮಾಡಿದ್ರೆ ಅವ್ರ ಹಿಂದೆ ಇವನದು ಶುರು ಕುಯ್ಯ್ಯೋಒ ಅಂತ ರಾಗ, ಹಚ ಅಂತ ಬೇರ್ಸಿದ್ರೆ ಪಾಪ ತೋಟಕೆ ಒಬ್ನೇ ಹೋಗಿ ಹೇಳಿ ಬರೋನು.
ಪಕ್ಕದ ಮನೆ ಬುಟ್ಟು ಮತ್ತೆ ಜೂಲದ್ದು ಸುಮಾರು ೪ - ೫ ವರ್ಷಗಳ ವ್ಯರಥ್ವ (ಬಹುಶ ರಾಣಿ ವಿಷಯದಲಿ, ಮೇಲಿನ ಸೈಟ್ ಮನೆ ನಾಯಿ), ಒಂದ್ ತರ triangular love ಸ್ಟೋರಿ.ಸಿಟ್ ಬಂದಾಗ ಲೂಸ್ ಮಾದನ ತರನೇ ಆಡೋನು. ಒಂದ್ ದಿನ ಸಿಟ್ಟಲಿ ಬುಟ್ಟುನ ಮುಂದಿನ ಒಂದ್ ಕಾಲನ್ನೇ ಎತ್ತ್ ಬಿಟ್ಟ!.
So, ಹೀಗೆ ಜೂಲು ಸುತ್ತ ಮುತ್ತ ೪ ೫ ಮನೆಗೆ ತುಂಬಾ ಫೇಮಸ್ ಆಗಿದ್ದ.
ಸುಮಾರ್ ಒಂದ್ ೨ ವರ್ಷದ ಹಿಂದೆ ಇರ್ಬೋದು ಒಂದ್ ದಿನ ಹಿಂಗೆ ಅಜ್ಜಿ ಮನೆ ಕಡೆ ಹೋದೆ, ಅತ್ತೆ ಮಾವ ಎಲ್ಲರ ಹತ್ರ ಮಾತಾಡಿ ಹೊರಗಡೆ ಬಂದೆ, ಸುಮಾರ್ ಅರ್ಧ ಗಂಟೆ ಆಯ್ತು, ಏನೋ ಇಲ್ಲ ಅನ್ಸ್ತು.. ಹೌದು ಜೂಲುವಿನ ಸ್ವಾಗತನೆ ಸಿಕ್ಕಿಲ್ಲ.
ಮಾವ ಜೂಲ ಎಲ್ಲಿ?..
ಆ ಕಡೆ ಇಂದ ಮೌನದ ಉತ್ತರ...
(ಒಂದ್ ತಿಂಗಳ ಹಿಂದೆ ಬೆಳಗೆ ತಿಂಡಿ ತಿಂದು ತೋಟದ ಕಡೆ ಹೋಗಿದ್ಹ್ ವಾಪಸ್ ಬರಲೇ ಇಲ್ಲ .ಆಮೇಲೆ ಪಕ್ಕದ ಮನೆ ಚಂದ್ರು ಕುರ್ಕ ಹಿಡ್ಕಂಡ್ ಹೋಯ್ತು ಅಂದಾಗಲೇ ಗೊತ್ತಾಗಿದ್ದು ಜೂಲ ಸತ್ ಹೋಯ್ತು ಅಂತ).
ಯಾಕೋ ಅವತ್ ಅಲ್ಲಿ ಇರಕೆ ಮನಸೆ ಆಗಿಲ್ಲ. ಸೀದಾ ಮನೆಗೆ ಬಂದು ಬೇಜಾರಲಿ ಜೂಲು ಮೇಲೆ ಬರೆದ ಕವನ ಹೀಗೆ.....
' ನಾನಂದುಕೊಂಡಷ್ಟು ಹಿತ ನೀಡಲಿಲ್ಲ ಈ ಬಾರಿಯ ನನ್ನೋರ ಪಯಣ
ಕಾರಣ ನನ್ನ ಪ್ರೀತಿಯ ಜೂಲುವಿನ ಮರಣ..
ಹುಡುಕಾಡಿದೆ ನಿನಗಾಗಿ ಊರೆಲ್ಲ,
ಗಂಟೆಗಳಾದರೂ ನಿನ್ನ ಸುಳಿವಿಲ್ಲ, ಆ ನಿನ್ನ ಹಾಡಿನ ದನಿಯಿಲ್ಲ..
ಹೋದಕೂಡಲೇ ನಿನ್ನ ಬಾಲದ ಸ್ವಾಗತ ಸಿಗಲಿಲ್ಲ..
ನೀ ಈ ಲೋಕದಿಂದ ದೂರವಾಗಿರಬಹುದು, ಕೆಲವು ದಿನಗಳಲ್ಲಿ ಎಲ್ಲರ ಮನಸಿಂದನು ಮರೆಯಾಗಬಹುದು ..
ಆದರೆ, ನೀನೆಂದಿಗೂ ಶಾಶ್ವತವಾಗಿರುವೆ ಈ ನನ್ನ ಕವನದ ಸಾಲುಗಳಲ್ಲಿ...
ನನ್ನ ಮನದ ಯಾವುದೊ ಒಂದು ಮೂಲೆಯಲ್ಲಿ...
I wish you better life in the next birth...
ನಾನಂದುಕೊಂಡಷ್ಟು ಹಿತ ನೀಡಲಿಲ್ಲ ಈ ಬಾರಿಯ ನನ್ನೋರ ಪಯಣ
ಕಾರಣ ನನ್ನ ಪ್ರೀತಿಯ ಜೂಲುವಿನ ಮರಣ.....
It was good experience for me reading this blog.i went 10yrs back.......where julu was king of machikoppa
ಪ್ರತ್ಯುತ್ತರಅಳಿಸಿ