ಮಂಗಳವಾರ, ಮಾರ್ಚ್ 9, 2010

'ಜೂಲು ದಿ ಡಾಗ್'

'ಜೂಲು' ಹೆಸರಲ್ಲೇ ಏನೋ ಒಂದ್ ತರ ಮೋಡಿ, ರಾಜ ಗಾಂಬಿರ್ಯದ ನಡಿಗೆ, ಕಟ್ಟು ಮಸ್ತಾದ ಮೈಕಟ್ಟು, ಉದ್ದನೆಯ ಡೊಂಕು ಬಾಲ(ಅದ್ನ ಏನು ಹೇಳ್ಬೇಕಾಗಿರ್ಲಿಲ್ಲ ಅನ್ಸುತೆ ಇರ್ಲಿ), ಇದು ನಮ್ಮ ಅಜ್ಜಿ ಮನೆ ನಾಯಿಯ ಬ್ರೀಫ್ ಇಂಟ್ರೋಡಕ್ಶನ್.

ಅದ್ಯಾಕೋ ಹುಟ್ಟಿ ಕಣ್ಬಿಟ್ಟು ೪ - ೫ ದಿನ ಚೆನ್ನಾಗಿ ಅಡ್ಕಂಡ್ ಇದ್ದಿದು ಇದ್ದುಕಿದ್ದಂಗೆ  ಡಲ್ ಅಗ್ಬಿಟ್ಟಿತ್ತು, ಊಟ, ಹಾಲು ಏನು ತಿನ್ತ ಇಲ್ಲ, ಹೋ ಇದ್ ಇನ್ನ ಬದಕದಿಲ್ಲ ಇಂತ ಎಲ್ಲ ಅಸೆ  ಬಿಟ್ಟಾಯ್ತು. ಕೊನೆಗೆ ನಮ್ ಅಮ್ಮ ಅದೇನೋ ಹಳೆ ಗ್ಯಾಸ್ಟ್ರಿಕ್ ಔಷಿದಿನ  ಕುಡ್ಸಿದ್ದೆ ತಡ ಮಾರನೆ ದಿನ ಹುಷಾರು ಆಗ್ಬಿಡ್ತು.(ಆ ಔಶಿದಿ ತಯಾರಕರು ಅಮೃತ ಫಾರ್ಮಸೆಟಿಕಲ್ಸ್:))
ಆದರು ಕೆಲವು ಸಾರಿ ಮಳೆಗಾಲ ಅಂದ್ರೆ  ಅದ್ಕೆ ಏನೋ ಅಲರ್ಜಿ, ಡಲ್ ಆಗಿ ಬಿಡೋದು...ಪಕ್ಕದ ಮನೆ ಅಜ್ಜ ಅನಂತಯ್ಯ ಈ ಸಾರಿ ಮಳೆಗಾಲ ದಾಟಲ್ಲ ನಿಮ್ ಜೂಲ ಅಂತ  ಪ್ರತಿ ಸಲ ಹೇಳಿ  ಹೇಳಿ ಪಾಪ ಒಂದ್ ಮಳೆಗಾಲದಲಿ ಅವ್ರೆ ತೀರ್ಕೊಂಡ್ ಬಿಟ್ರು.

ನಮ್ಮನೆ ಇಂದ ೮ ಕಿ ಮೀ ಅಷ್ಟೇ ಇರೋದು ಅಜ್ಜಿ ಮನೆಗೆ, ಸುಮಾರು ೨ ಕಿ.ಮೀ ಗುಡ್ಡ ಬೆಟ್ಟಗಳ ಕಾಡು ದಾರೀಲಿ ನಡ್ಕಂಡ್ ಹೋಗ್ಬೇಕು, ಆ ದಾರೀಲಿ ನಡ್ಕಂಡ್ ಹೋಗದೆ ಒಂದ್ ಮಜಾ ಯಾವತ್ತು, ಸುಸ್ತು ಅನ್ಸೆ ಇಲ್ಲ (ಯಾಕಂದ್ರೆ ಅದು ಅಜ್ಜಿ ಮನೆ ದಾರಿ:))
ಪ್ರತಿ ಸರಿನು ಇನ್ನೇನು ಗೇಟು ತಗ್ದು ಅಂಗಳಕೆ ಹೋಗ್ಬೇಕು, ಆಗ್ಲೇ ರೆಡಿ, ಕೈ ಕಾಲು ಎಲ್ಲ ಒಂದ್ ಸರಿ ನೆಕ್ಕಿ, ಒಂದ್ ವಿಷಲ್ ಹಾಕಿ ಸುಸ್ವಾಗತ ಹೇಳೋನು.
ಒಂದ್ ಸರಿನಾದ್ರು ಜೂಲು ಬಗ್ಗೆ ಮಾತನಾಡದ ದಿನನೇ ಇರ್ತಿರಿಲ್ಲಿಯ. ಸುಮಾರ್ ಸರಿ ಜೂಲನ ನೋಡಕೆ ಅಂತಾನೆ ಅಜ್ಜಿ ಮನೆಗೆ ಹೋಗಿದ್ದು ಉಂಟು.

ಬಹಳ ಚಿಕ್ಕ ವಯಸಲ್ಲೇ ಪಾಪ ದುಶ್ಚಟಕೆ ಬಲಿಯಾಗಿ ಬಿಟ್ಟ, ದಿನಕೆ ೨ ರಿಂದ ೩ ಬೀಡಿ ತಿನ್ನೋನು(ಸೇದಿ ಬಿಸಾಕಿದ ತುಂಡು ಆಮೇಲೆ ಅದರ ಬೂದಿ) ಅದ್ನ ತಿಂದು ಹಾಗೆ ಬಿಸಿಲಲ್ಲಿ ಮಲಗಿದ ಅಂದ್ರೆ ಪಕ್ಕದ ಮನೆ ಬುಟ್ಟು(enemy) ಗುರ್ರ್ರ್ ಅಂತ ಬಂದಾಗಲೇ ಸರಿ ಇವ ಏಳದು. ಅಷ್ಟೇ ಅಲ್ಲ ಒಳ್ಳೆಯ ಹಾಡುಗಾರ ಕೂಡ, ಯಾರಾದ್ರೂ ಹಾಡ್ ಹೇಳಕೆ ಸ್ಟಾರ್ಟ್ ಮಾಡಿದ್ರೆ ಅವ್ರ ಹಿಂದೆ ಇವನದು ಶುರು ಕುಯ್ಯ್ಯೋಒ ಅಂತ ರಾಗ, ಹಚ ಅಂತ ಬೇರ್ಸಿದ್ರೆ ಪಾಪ ತೋಟಕೆ ಒಬ್ನೇ ಹೋಗಿ ಹೇಳಿ ಬರೋನು.
ಪಕ್ಕದ ಮನೆ ಬುಟ್ಟು ಮತ್ತೆ ಜೂಲದ್ದು ಸುಮಾರು ೪ - ೫ ವರ್ಷಗಳ ವ್ಯರಥ್ವ (ಬಹುಶ ರಾಣಿ ವಿಷಯದಲಿ, ಮೇಲಿನ ಸೈಟ್ ಮನೆ ನಾಯಿ), ಒಂದ್ ತರ triangular love ಸ್ಟೋರಿ.ಸಿಟ್ ಬಂದಾಗ ಲೂಸ್ ಮಾದನ ತರನೇ ಆಡೋನು. ಒಂದ್ ದಿನ ಸಿಟ್ಟಲಿ ಬುಟ್ಟುನ ಮುಂದಿನ ಒಂದ್ ಕಾಲನ್ನೇ ಎತ್ತ್ ಬಿಟ್ಟ!. 

So, ಹೀಗೆ  ಜೂಲು  ಸುತ್ತ  ಮುತ್ತ  ೪  ೫ ಮನೆಗೆ ತುಂಬಾ ಫೇಮಸ್ ಆಗಿದ್ದ.

ಸುಮಾರ್ ಒಂದ್ ೨  ವರ್ಷದ ಹಿಂದೆ ಇರ್ಬೋದು ಒಂದ್ ದಿನ ಹಿಂಗೆ ಅಜ್ಜಿ ಮನೆ ಕಡೆ ಹೋದೆ, ಅತ್ತೆ ಮಾವ ಎಲ್ಲರ ಹತ್ರ ಮಾತಾಡಿ ಹೊರಗಡೆ ಬಂದೆ, ಸುಮಾರ್ ಅರ್ಧ ಗಂಟೆ ಆಯ್ತು, ಏನೋ ಇಲ್ಲ ಅನ್ಸ್ತು.. ಹೌದು  ಜೂಲುವಿನ  ಸ್ವಾಗತನೆ ಸಿಕ್ಕಿಲ್ಲ.
 ಮಾವ ಜೂಲ ಎಲ್ಲಿ?.. 
ಆ ಕಡೆ ಇಂದ ಮೌನದ ಉತ್ತರ...

(ಒಂದ್ ತಿಂಗಳ ಹಿಂದೆ ಬೆಳಗೆ ತಿಂಡಿ ತಿಂದು ತೋಟದ ಕಡೆ ಹೋಗಿದ್ಹ್ ವಾಪಸ್ ಬರಲೇ ಇಲ್ಲ .ಆಮೇಲೆ ಪಕ್ಕದ ಮನೆ ಚಂದ್ರು  ಕುರ್ಕ  ಹಿಡ್ಕಂಡ್  ಹೋಯ್ತು ಅಂದಾಗಲೇ ಗೊತ್ತಾಗಿದ್ದು ಜೂಲ ಸತ್ ಹೋಯ್ತು ಅಂತ).

ಯಾಕೋ ಅವತ್ ಅಲ್ಲಿ ಇರಕೆ ಮನಸೆ ಆಗಿಲ್ಲ. ಸೀದಾ ಮನೆಗೆ ಬಂದು ಬೇಜಾರಲಿ ಜೂಲು ಮೇಲೆ ಬರೆದ ಕವನ ಹೀಗೆ.....

' ನಾನಂದುಕೊಂಡಷ್ಟು ಹಿತ ನೀಡಲಿಲ್ಲ ಈ ಬಾರಿಯ ನನ್ನೋರ ಪಯಣ
ಕಾರಣ ನನ್ನ ಪ್ರೀತಿಯ ಜೂಲುವಿನ ಮರಣ..

ಹುಡುಕಾಡಿದೆ ನಿನಗಾಗಿ ಊರೆಲ್ಲ, 
ಗಂಟೆಗಳಾದರೂ ನಿನ್ನ ಸುಳಿವಿಲ್ಲ, ಆ ನಿನ್ನ ಹಾಡಿನ ದನಿಯಿಲ್ಲ..
ಹೋದಕೂಡಲೇ ನಿನ್ನ ಬಾಲದ ಸ್ವಾಗತ ಸಿಗಲಿಲ್ಲ..

ನೀ ಈ ಲೋಕದಿಂದ ದೂರವಾಗಿರಬಹುದು, ಕೆಲವು ದಿನಗಳಲ್ಲಿ ಎಲ್ಲರ ಮನಸಿಂದನು ಮರೆಯಾಗಬಹುದು ..
ಆದರೆ, ನೀನೆಂದಿಗೂ ಶಾಶ್ವತವಾಗಿರುವೆ ಈ ನನ್ನ ಕವನದ ಸಾಲುಗಳಲ್ಲಿ...
ನನ್ನ ಮನದ ಯಾವುದೊ ಒಂದು ಮೂಲೆಯಲ್ಲಿ...
I wish you better life in the next birth...

ನಾನಂದುಕೊಂಡಷ್ಟು ಹಿತ ನೀಡಲಿಲ್ಲ ಈ ಬಾರಿಯ ನನ್ನೋರ ಪಯಣ
ಕಾರಣ ನನ್ನ ಪ್ರೀತಿಯ ಜೂಲುವಿನ ಮರಣ.....

ಮಂಗಳವಾರ, ಫೆಬ್ರವರಿ 9, 2010

ಹಾಗೆ ಸುಮ್ಮನೆ...

 ವಸಂತ 
ಇದಾವ ಲೋಕವಿದು, ಕನಸೋ? ನನಸೋ? ಒಂದೂ ತಿಳಿಯದು..
ಮಾಗಿಯಲಿ ಚಿಗುರ ಬಯಸಿದ ನಾನೆಂತ ಮೂರ್ಖ!!

ನನ್ನೆದೆ ನಿತ್ಯ ಹರಿದ್ವರ್ಣವಲ್ಲ ಗೆಳತಿ,
ನೋಡು ನೀನಿಲ್ಲದೆ ಮನದಿಂದ ಒಂದೊಂದೇ ಕನಸುದುರಿ ಬರಡಾಗಿಹುದಲ್ಲ ಒಣಗಿ..
ಅದೆಷ್ಟು ಆಳವಾಗಿ ಬೆರೂರಿದ್ದಿ ನೀ..
ಈಗೇಕೆ ಹೀಗೆ..
ಹರಿವ ನೀರಲ್ಲಿ ಕಲರವವಿಲ್ಲ, ಕೋಗಿಲೆಯ ದನಿಯಲಿ ಇಂಪಿಲ್ಲ...
ಅದರೇನು ಕಣ್ಣೀರ ಬಿಸಿಉಸಿರ ನಿನ್ನ ಕಾಣಿಕೆ ಇದೆಯಲ್ಲ..
ನನಗಿನ್ನು ವಸಂತದ ಕನಸೂ ಇಲ್ಲ..

ವಾಸ್ತವದಿ ನೀ ದೂರವಿರಬಹುದು...
ನನ್ನ ಪ್ರೇಮಕೆ ಎದೆಯಲೊಂದು ಸಾಮ್ರಾಜ್ಯ ಸೃಷ್ಟಿಸುವೆ, ಕನಸುಗಳ ಕಾವಲಿಡುವೆ...
ವರುಷ ವರುಷಗಳೇ ಉರುಳಲಿ,
ಕಳೆದ ವಸಂತದ ನೆನಪಲ್ಲೇ ಕಾಲವನು ದೂಡುವೆ......
----------------------------


      ಹುಚ್ಚು 
ಶುರುವಾಯಿತೆಂದರೆ ಪ್ರೇಮ,
ಮನಸು ನಿಲ್ಲದು ಅದೇ ನಿಯಮ..
ಕಣ್ಣು ಎಲ್ಲೋ ನೋಡಿದರೆ ಮನವೆಲ್ಲೋ ಸುತ್ತುವುದು...
ಪ್ರತಿ ಎದೆ ಬಡಿತವು ಅವಳ ನೆನಪನೆ ತಂದು, 
ಕಣ್ಣು ಬಿಟ್ಟೆ ಪ್ರೇಮನಿದ್ದೆಯ ಕಲಿಸುವುದು..
ಪ್ರೇಮಲತಾ ಮಂಟಪದ ತಂಗಾಳಿ ಹಿಡಿಸುವುದು ತಡೆಯಲಾಗದ ಚಳಿ..
ಪ್ರೇಮವೊಂದು ಸಾಗರ, ಹೆಜ್ಜೆ ಹೆಜ್ಜೆಗೂ ಆಳ ಹೆಚ್ಚು..
ಆಗಲೇ ತಿಳಿಯಿತು ನನಗೆ, ಇದು ವಾಸಿಯಾಗದ `ಹುಚ್ಚು`..       
                                                
----------------------------



ಮಹಡಿ 
ಕನಸೆಂಬುದು ಕನ್ನಡಿ..
ಮುಖವು ಮನಸಿನ ಮುನ್ನುಡಿ...
ನನ್ನ ಕನಸಿನಲಿ ನಿನ್ನೊಂದಿಗೆ ನನಗೆ ಪಾತ್ರವಿದೆ..
ನಿನ್ನ ಮನಸಿನಲಿ ಅದೇಕೆ ನಾನಿಲ್ಲದೇ ಹೋದೆ?..
ತಿಳಿಯದೆ ಅಕ್ರಮಿಸಿಕೊಂಡೆ ನೀ ನನ್ನೆದೆಯ ಪ್ರತಿ ಕೋಣೆ...
ಆಗಲೇ ಶುರುವಾಗಿದ್ದು ವಾಸ್ತವಕ್ಕೂ, ಭಾವನೆಗಳಿಗೂ ಹಣಾಹಣಿ...
ಕೊನೆಗೂ ಗೆದ್ದವು ಭಾವನೆಗಳು ವಿಪರೀತ ಹೋರಾಡಿ...
ಅದರೇನು, ಏರದಾದೆನೆ  ಆ ನಿನ್ನ ಮನಸ್ಸೆಂಬ `ಬಹು ಮೆಟ್ಟಿಲುಗಳ ಮಹಡಿ` 

----------------------------



     ಆಟ
ಮನಸಿನ ಸಂತೆಯಲಿ ಕನಸುಗಳ ಮಾರಾಟ...
ಕೊಂಡಿದ್ದು ನೀನು, ಕಳೆದದ್ದು ನಾನು.

ಬಳ್ಳಿಯ ಆಸರೆಗಾಗಿ ಮರದ ಹುಡುಕಾಟ...
ಬಯಸಿದೆ ನಾನು, ವರವಾದೆ ನೀನು.

ಕೊಟ್ಟು ಪಡೆವ ಈ ಆಟದಲಿ...
 ಮೊದಲು ಸೋತಿದ್ದು ನೀನೋ? ನಾನೋ?.
                                           
----------------------------



   ನೆನಪು...
ಆಗೊಮ್ಮೆ ಈಗೊಮ್ಮೆ ಆಗಸದಲಿ ಕಂಡು ಮಾಯವಾಗುವ ಅದ್ರುಷ್ಟದ, ಚುಕ್ಕಿಗಾಗಿ
ಇರುಳೆಲ್ಲ ಕಾದು ಕೂತ ನೆನಪು...

ಹೂವಿಂದ ಹೂವಿಗೆ ಹಾರುತ ಕೈಗೆಟುಕದ, ಚಿಟ್ಟೆಗಾಗಿ 
ದಿನವೆಲ್ಲ ತಡಕಾಡಿದ ನೆನಪು...
 
ಬೆಲೆಕಟ್ಟಲಾಗದ, ಕಳೆದುಹೋದ  ಬಣ್ಣದ ಬುಗುರಿಗಾಗಿ
ಜಗವೆಲ್ಲ ಹುಡುಕಾಡಿದ ನೆನಪು...

                                        -ಶಿವ 
----------------------------


ಗುರುವಾರ, ಫೆಬ್ರವರಿ 4, 2010

ಮೊದಲ ಪೆಟ್ಟು..



ಇದು ನನ್ನ ಮೊದಲನೇ ಪೋಸ್ಟ್ ಅದ್ಕೆ ಸ್ವಲ್ಪ ಏರು ಪೇರು ಇರ್ಬೋದು ಬರವಣಿಗೇಲಿ...ಓಕೆ,
ನನ್ ಬ್ಲಾಗ್ ಹೆಸರು ''ನಾನು ನನ್ನ ಊರು ಮತ್ತು ನನ್ನ ಜನ'' ಅದ್ಕೆ ಮೊದ್ಲು ನಾ ನನ್ ಕಥೆ ಇಂದ ಸ್ಟಾರ್ಟ್ ಮಾಡ್ತಿನಿ ಆಮೇಲೆ, ನಮ್ ಊರು ನಮ್ ಜನಗಳ ಕಡೆ ಹೋಗೋಣ...:)






ಬಹುಶ ಎಲ್ಲರ ಜೀವನದಲ್ಲೂ ತಮ್ಮ ತಮ್ಮ ಮೊದಲ ಅನುಭವಗಳನ್ನ ಮರೆಯೋಲ್ಲ, ಆಗಾಗ ಮೆಲ್ಕ್ ಹಾಕ್ತ ಇರ್ತಾರೆ ಅಂದ್ಕೋತೀನಿ..
ಹಾಗೆ ಇದು ನಾನು ಮೊದಲ್ ಸಾರಿ ಪೆಟ್ಟು ತಿಂದ ಕತೆ.(ಇದ್ಕೂ ಮೊದ್ಲು ಸಣ್ಣ ಪುಟ್ಟ ಏಟ್ ತಿಂದಿರ್ಬೋದು ಆದ್ರೆ ಅವುಗಳಲ್ಲಿ ಅಂತದ್ದೇನು ವಿಶೇಷತೆ ಇಲ್ಲ:)) .

ಅವತ್ತು ಮೊದಲ ದಿನ, ಅಷ್ಟು ಚೆನಾಗಿದ್ದ ಜುಟ್ಟು ಬೇಡ ಬೇಡ ಅಂದ್ರು ಕತ್ತರ್ಸಿ ಬಿಟ್ರು, ಇಲ್ಲ ಅಂದ್ರೆ ನಿಂಗೆ ಕಮಾನ್ ಕಟ್ಟಿಂಗ್(ಸುತ್ತ ಬೋಳಿಸಿ ನೆತ್ತಿಲಿ ಜುಟ್ಟು) ಮಾಡ್ಸ್ತೀನಿ ಅಂತ ಬೆದರಿಕೆ ಬೇರೆ. ಸರಿ, ಅಮ್ಮ ಪೂಜೆ ಮಾಡಿ, ದೇವರ ಮುಂದೆ ಕೂರ್ಸಿ ಕುಂಕುಮ ಎಲ್ಲ ಏರ್ಸಿ, ಹಾಲು ಕೊಟ್ಟು, ಹೊಸ ಅಂಗಿ ಚಡ್ಡಿ ಎಲ್ಲ ಆಯಿತು, ಏನಕ್ಕೆ ಅಂತ ಗೊತಾಗ್ಲಿಲ್ಲ, ಬಹುಶ ಯಾರೋ ನೆಂಟರ ರ ಮನಗೆ ಅಂತ ತಿಲ್ಕಂಡ್ ಕುಷಿಲೆ ಇದ್ದೆ , ಆದ್ರೆ ದಾರೀಲಿ ಪೋಸ್ಟ್ ಮ್ಯಾನ್ ಕಿಟ್ಟಣ್ಣ, ಎಲ್ಲಿಗೆ ಹೊರಟ್ರಿ ಜಯಲಕ್ಷ್ಮಮ ಅಂತ ಕೇಳ್ದಾಗ, ಇಲ್ಲೇ ಮಗನ್ನ ಶಾಲೆಗೆ ಸೇರ್ಸಕೆ ಅಂತ ಹೇಳಿದಾಗ್ಲೆ ಗೊತಾಗಿದ್ದು, ಓಹೋ ನಾನು ಹರಕೆಯ ಕುರಿ ಆಗಿದ್ದು, ಅದ್ಕೆ ಹಾಲು ಕುಂಕುಮ ಎಲ್ಲ ಅಂತ. ಹೆಂಗೋ ಆಟ ಆಡ್ಕೊಂಡ್ ಅರಾಮಗೆ ಇದ್ದೆ ಈ ಶಾಲೆ ಟೀಚರ್ ಪೆಟ್ಟು ಎಲ್ಲ ಯಾಕಪ್ಪ ಅಂತ ನಂದು, ದಾರಿಲೇ ಸುಮಾರು ಐಡಿಯಾ ಬಂದವು, ಹೆಂಗಾರೆ ಇದ್ರಿಂದ ತಪ್ಸ್ಕಂಬೇಕು ಅಂತ. ಇನ್ನ ಶಾಲೆಗೆ ಸೇರ್ಸಕೆ ಹೋದಾಗ ಅಲ್ಲಿ ಮೋಹಿನಿ ಟೀಚರ್ ಒಬ್ನಿಗೆ ಹೊಡಿಯೋದನ್ನ ನೋಡಿ ಹೃದಯಾನೆ ಒಡೆದ್ ಹೋಯ್ತು, ಅವ್ರೆ ನಮ್ಮ ಕ್ಲಾಸ್ ಟೀಚೆರ್ ಅಂತೆ!! ಅಯ್ಯೋ ಮುಗಿತು ಕತೆ ನಂದು ಅಂದ್ಕಂಡೆ; ಸರಿ ಅಡ್ಮಿಶನ್ ಎಲ್ಲ ಮುಗಿತು, ಕ್ಲಾಸ್ ಅಲ್ಲಿ ಕೂರ್ಸಿ ಅಮ್ಮ ಮನೆಗೆ ಹೋದರು. ಮನೆ ಗೆ ಮೆಟ್ಲು ಇಳ್ದು ಇನ್ನೇನು ಬಾಗ್ಲು ತಗಿಬೇಕು ಅಮ್ಮ ಶಾಕ್ ನಾನ್ ಅಲ್ಲಿ ಹಾಜರ್!!!(ಅಮ್ಮ ಮೇಲಿನ ರೋಡಿಂದ ಹೋಗೋದನ್ನ ನೋಡ್ಕಂಡ್, ಕೆಳಗಿನ ರೋಡ್ ಇಂದ ಒಂದೇ ಓಟದಲಿ ಮನೆ ಸೇರಿದ್ದೇ).ಉಫ್ಫ್ ಆದ್ರು ಬಿಡ್ಬೇಕ ಪಕ್ಕದ್ ಮನೆ ಫಿಲಿಪನ ಸಹಾಯ ತಗಂಡ್ ಮತ್ತೆ ಶಾಲೆಗೆ ತಂದ್ ಕೂರ್ಸೆ ಬಿಟ್ರು.

ಹೀಗೆ ನನ್ನ ಶಾಲೆಯ ದಿನ ಸ್ಟಾರ್ಟ್ ಆಯಿತು, ಮನಸಿಲ್ಲದ ಮನಸಲಿ, ದಿನ ಶಾಲೆ ಅದೇನೋ ಜೈಲಿನ ಅನುಭವ!!! ಹೀಗಿರ್ವಾಗ ಶಾಲೆ ಮೇಲೆ ಇಷ್ಟ ಅಗಕೆ ಶುರುವಾಗಿದ್ದು ಲೆನಿನ್ ಗೆಳೆತನ ಆದಮೇಲೆ(ಅದ್ಯಾಕೆ ಅವ್ನ ಹೆಸರು ಹಂಗೆ ಅಂತ ಗೊತ್ತಿಲ್ಲ, ಬಹುಶ ಅವರ ಅಪ್ಪ ಪಕ್ಕ ಕಾಮ್ಮುನಿಸ್ಟ್ ಇದ್ದಿರ್ಬೋದು:)), ಹಾಗೆ ಬರ್ತಾ ಬರ್ತಾ ಗೆಳೆತನ ಜಾಸ್ತಿ ಆಯಿತು, ಶಾಲೆಗೆ ೮ ಗಂಟೆಗೆ ರೆಡಿ!!

ಆಗ ೪ ನೆ ಕ್ಲಾಸ್ ಇರ್ಬೋದೆನ, ಸೈಕಲ್ ಹೊಡೆಯೋ ಹುಚ್ಚು, ತಂದ ಪೂರ್ತಿ ಗೋಲಿನ ಬೆಳ್ಗೆ ಸೆಶನ್ ಅಲ್ಲೇ ಸೋತ ಲೆನಿನ್ ರೊಚ್ಚಿಗೆದ್ದು ಸೈಕಲ್ ಶಾಪ್ಗೆ ಹೋಗಿ ಕಬ್ನದ ಡಾಮ ಗೋಲಿ ತಂದು ಸಂಜೆ ಪೂರ್ತಿ ನಿನ್ನ ಗೋಲಿನ ಪುಡಿ ಮಾಡ್ಲಿಲ್ಲ ಅಂದ್ರೆ ನನ್ ಹೆಸ್ರುನ ತಗ್ದು ನಾಯಿಗೆ ಇಡು ಅಂತ (!!!) ಶಪತ ಮಾಡಿ ಹೋದವ ಅದ್ಯಾಕೋ ಹ್ಯಾಪ್ ಮೊರೆ ಹಾಕಂಡ್ ಬಂದ...ಏನು ಅಂತ ವಿಚಾರಿಸಿದರೆ ಆಗ ಗೊತಾಯ್ತು ಬಾಡ್ಗೆ ಸೈಕಲ್ ಗಂಟೆಗೆ ೫೦ ಪೈಸೆ ಇದ್ದಿದುನ ಒಂದೇ ಸರಿ ಸೈಕಲ್ ಶಾಪ್ ರಾಜಣ್ಣ ೧ ರೂಪಾಯಿಗೆ ಏರಿಸಿಬಿಟ್ಟಿದಾನೆ ಅಂತ....ಈಗ ಏನ್ ಮಾಡದು ಮನೇಲಿ ಕಷ್ಟ ಪಟ್ಟು ೧ ತಿಂಗಳು striike ಮಾಡಿ ಹೇಗೋ ಅಮ್ಮನ ಹತ್ರ ದಿನಕೆ ೫೦ ಪೈಸೆ ಅಪ್ಪಂಗೆ ಗೊತ್ಆಗ್ದಂಗೆ ಇಸ್ಕೊಂಡ್ ಬರೋದು, ೧ ರುಪಾಯಿ ಕೇಳಿದ್ರೆ ನಾಳೆ ಇಂದ ಸೈಕಲ್ ಇಲ್ಲ!!. ಆಕಾಶನೇ ತಲೆ ಮೇಲೆ ಬಿದ್ದಂಗೆ ಆಯಿತು. ಸರಿ ಇಬ್ರು ಸೇರಿ ರಾಜಣ್ಣನ ಹತ್ರ ಹೋಗಿ ನಾವು ದಿನ ಬರ್ತಿವಿ ಅಲ ನಮಗೆ ಮಾತ್ರ ಹಳೆ ರೇಟ್ ಗೆ ಕೊಡ್ಬೇಕು ಅಂತ ಎಸ್ಟ್ ಕೇಳಿದ್ರು ಅಸಾಮಿ ಒಪ್ಲಿಲ್ಲ. ಪೆಚ್ಚು ಮೊರೆ ಹಾಕ್ಕಂಡ್ ಇಬ್ರು ಮನಗೆ ಹೋದ್ವಿ. ಲೆನಿನ್ಗೆ ಈ ತಲೆಬಿಸಿಲಿ ಬೆಳ್ಗೆ ಮಾಡಿದ ಶಪತನೆ ಮರ್ತೋಯ್ತು, ಇಬ್ರು ಸಂಜೆ ಊಟ ಮಾಡಿ ಇವಿನಿಂಗ್ ಮೀಟಿಂಗ್ ಪಾಯಿಂಟ್ ಹತ್ರ ಕೂತ್ವಿ.
ಆ ವಿಟ್ಲ ಮತ್ತೆ ಆ ಪೈ ಪ್ರಕಾಶ್ ನಮ್ ಮುಂದೇನೆ ಬೆಲ್ ಮಾಡ್ಕಂಡ್ ಆಚೆ ಇಚೆ ರೌಂಡ್ ಹೋಗ್ತಾ ಇದ್ರೆ ಮೈ ಎಲ್ಲ ಉರಿಯದು. ಹಾಗೆ ೨-೩ ದಿನ ಆಯಿತು ಸೈಕಲ್ ಹೊಡೆಯದೆ.

ಸರಿ ಕೊನೆಗೆ ಒಂದ್ ತೀರ್ಮಾನಕ್ಕೆ ಬಂದ್ವಿ ಈ ೧ - ೨ ರುಪಾಯಿ ಬದ್ಲು ಒಟ್ಟಿಗೆ ಹೆಂಗಾರೆ ಒಂದ್ ೫೦- ೧೦೦ ರುಪಾಯಿ ಸಿಕ್ಬಿಟ್ರೆ ೧-೨ ತಿಂಗಳಿಗೆ ಚಿಂತೆ ಇಲ್ಲ. ಆದ್ರೆ ೧೦೦ ರು ಅಂದ್ರೆ ಹುಡ್ಗಾಟನ ಎಲ್ಲಿಂದ ತರೋದು. ಬೆಂಗಳುರಿಂದ ಮಾವನಾರು ಬಂದ್ರೆ ವಾಪಾಸ್ ಹೋಗೋವಾಗ ೫೦-೧೦೦ ರುಪಾಯಿ ಸಿಗುತ್ತೆ( ಒಂದೊಂದು ಸಾರಿ ಅವರು ಮರೆಯೋ ಚಾನ್ಸ್ ಇರುತೆ, ಆಗ ಅವ್ರ ಬ್ಯಾಗ್ ತಗಂಡು ಬಸ್ ಸ್ಟಾಪ್ ತನಕ ಹೋಗ್ಬೇಕು), ಆದ್ರೆ ದೀಪಾವಳಿಗೆ ಇನ್ನ ೨ ತಿಂಗಳು ಇದೆ ಮಾವ ಬರಕೆ. ಅವ ಆಗಲೇ ನಾನ್ ತರ್ತೀನಿ ಅಂತ ಘೋಷಣೆ ಮಾಡ್ಬಿತ್ತಿದಾನೆ. ಈಗ ನಾ ಎಲ್ಲಿಂದ ತರೋದು..ರಾತ್ರಿ ಎಲ್ಲ ಅದೇ ತಲೇಲಿ , ಎಡಕೆ ತಿರುಗಿದರೆ ೧೦೦ ರುಪಾಯಿ ನೋಟು ,ಬಲ್ಗಡೆ ತಿರುಗಿದ್ರೆ ಆ ವಿಟ್ಲ ಮತ್ತೆ ಪೈಪ್ರಕಾಶ್ ಬೆಲ್ ಮಾಡ್ಕಂಡ್ ಹೋದಂಗೆ...

ಮಾರನೆ ದಿನ ಬೆಳಗೆ ಯಾಕೋ ಶಾಲೆಗೆ ಹೋಗಕೆ ಮನಸೆ ಇಲ್ಲ, ಹೊರಗಡೆ ಇಂದ ಸೀಟಿ ಸಿಗ್ನಲ್, ಒಹ್ ಆಗಲೇ ಲೆನಿನ್ ಹಾಜರ್, ಸರಿ ಬೇಗ ಬೇಗ, ಸಾನ, ತಿಂಡಿ ಮುಗ್ಸಿ ಬ್ಯಾಗ್ ಹಾಕಂಡ್ ಹೊರಟೆ. ಅವ ಬಾರಿ ಕುಶಿ ಇದ್ದಂಗೆ ಕಾಣ್ತಾನೆ, ಹತ್ರ ಹೋದಕೂಡಲೇ ಕಾಣ್ತು ೧೦೦ ರುಪಾಯಿ ನೋಟ್ನ ಹಂಗೆ ಜೋಬಲ್ಲಿ ಚೂರು ಕಾಣೋ ಹಾಗೆ (ನಂಗೆ ತೋರ್ಸಕೆ ) ಇಟ್ಟಿದಾನೆ.
ಇನ್ನು ನಾನೇನು ಮಾಡೋದು ಅಂತ ಯೋಚನೆ ಹಿಡಿತು..ಅದೇ ಯೋಚನೆಲಿ ಅವತ್ತು ೮ ಗೋಲಿ!! ಬೇರೆ ಕಳಕೊಂಡೆ ಅವನ್ ಜೊತೆ ಆಟದಲ್ಲಿ.
ಸರಿ ಸಂಜೆ ಆಯಿತು, ದಾರಿಲಿ ಬರ್ತಾ ರಾಜಣ್ಣನ ಶಾಪ್ ಕಡೆ ಬೇಡ ಬೇಡ ಅಂದ್ರು ಕಣ್ಣು ಆ ಕಡೆನೇ ಸೆಳೆತ ,ಕೆಂಪ್ ಕಲರ್ 'ಬುಲ್ಲೆಟ್ ಸೈಕಲ್' ಕಣ್ ಕುಕ್ತ ಇತ್ತು ,ಮನೆಗೆ ಹೋಗಿ ಕೈ ಕಾಲ್ ಮುಖ ತೊಳೆದು ಊಟ ಮಾಡಿ(ಸಂಜೆ ಶಾಲೆ ಇಂದ ಬಂದ್ರ ಮೇಲೆ ಊಟ ಮಾಡೋ ಪದ್ದತಿ) ಹೊರಗಡೆ ಹೋಗಲೇ ಬಾರ್ದು ಅಂತ ತೀರ್ಮಾನ ಮಾಡಿಯಾಯ್ತು. ಆದ್ರೆ ಕಿಟಕಿ ಕಡೆ ನೋಡಿದ್ರೆ ಲೆನಿನ್ ಆಗ್ಲೇ ವಿಟ್ಲ ಮತ್ತೆ ಪೈ ಜೊತೆ ಸೇರಿ ಸೈಕಲ್ ಹೊಡಿತ ಇದಾನೆ!! ಅವನು ಅವ್ರ ಪಾರ್ಟಿ ಸೇರಿಬಿಟ್ರೆ ಏನ್ ಕತೆ..ಇನ್ನ ಸುಮ್ನೆ ಕೂತರೆ ಅಗದಿಲ್ಲ ಏನರೆ ಮಾಡಬೇಕು ಅಂತ ಆವತ್ ರಾತ್ರಿ ಎಲ್ಲ ಸ್ಕೆಚ್ ಹಾಕಿಯಾಯ್ತು. ಕೊನೆಗೆ ಕಣ್ಣಿಗೆ ಬಿದ್ದಿದ್ದು ಅಮ್ಮನ 'ಸಾಸಿವೆ ಕಾಳಿನ ಡಬ್ಬಿ'(cum ದುಡ್ಡಿನ ಬಾಕ್ಸ್ )!!!.
ಸರಿ ಡಿಸೈಡ್ ಮಾಡಿಯಾಯ್ತು ಅದ್ಕೆ ಕೈ ಹಾಕದು ಅಂತ, ಆದ್ರೆ ಅದು ಅಷ್ಟೊಂದು ಸುಲ್ಬದಲಿ ಇಲ್ಲ, ಎತ್ರದಲಿ ಬೇರೆ ಇದೆ, ಅಮ್ಮ ಇಲ್ಲದಾಗ್ಲೆ ಸರಿ ಈ ಕೆಲಸ ಆಗದು, ಏನ್ ಮಾಡದು ಅಂತ ಯೋಚನೆ ಮಾಡೋ ಅಷ್ಟೊತ್ಗೆ, ಪಕ್ಕದ ನಾಗರತ್ನಮ್ಮ ನಾಳೆ ಶುಕ್ರವಾರ ನಮ್ ಮನೆಗೆ ಅರಶಿನ ಕುಂಕುಮ ಇಟ್ಕೊಂಡ್ ಹೋಗಕೆ ಬರ್ರಿ ಅಂತ ಕಿಟ್ಕಿಲಿ ಅಮ್ಮಂಗೆ ಮೆಸೇಜ್ ಕೊಟ್ಟಿದ್ದು ಕಿವಿಗೆ ಬಿತ್ತು. ಸರಿ ನಾಳೆ ಸಂಜೆ ಡಬ್ಬಿಗೆ ಕೈ ಹಾಕದು ಅಂತ ಮುಹೂರ್ತ ಇಟ್ಟಾಯ್ತು...

ಶಾಲೆ ಇಂದ ಬಂದ್ ಅಮ್ಮ ಹೋಗದನ್ನೇ ಕಾದು, ಕುರ್ಚಿ ಮೇಲೆ ಕುರ್ಚಿ ಇಟ್ಟು ಡಬ್ಬಿಗೆ ಕೈ ಹಾಕೆ ಬಿಟ್ಟೆ, ಒಳಗೆ ಗರಿ ಗರಿ ೧೦೦ ರುಪಾಯಿ!!! ಹಂಗೆ ಜೋಬಿಗೆ ಹಾಕಂಡ್, ಡಬ್ಬಿ, ಕುರ್ಚಿ ಎಲ್ಲ ಇದ್ದ ಜಾಗದಲ್ಲೇ ಅನುಮಾನ ಬರ್ದಿದಂಗೆ ಇಟ್ಟು ಸೀದಾ ಲೆನಿನ್ ಮನೆ ಹತ್ರ ಓಟ....
ಒಂದೇ ಸಿಗ್ನಲ್ಗೆ ಹೊರ ಬಂದ..ಕತೆ ಎಲ್ಲ ಹೇಳಾಯ್ತು ಅವಂಗೆ , ಈ ೧೦೦ ರೂಪಾಯ್ನ ಡೈರೆಕ್ಟಾಗಿ ರಾಜಣ್ಣನ ಹತ್ರ ಕೊಡಬೇಡ , ಅವ್ನ ಹತ್ರ ಚೇಂಜ್ ಇರಲ್ಲ ನಾಳೆ ಇಸ್ಕೊ ಅಂತ ಹೇಳ್ತಾನೆ. ಅದ್ಕೆ ಚೇಂಜ್ ಮಾಡಿ ೫, ೧೦ ಇಟ್ಕೋ ಜೋಬಲ್ಲಿ ಉಳ್ಕಿದುನ ಎಲ್ಲಾದ್ರೂ ಕದ್ದಿಡು ಅಂತ ಸಜೆಶನ್ ಕೊಟ್ಟ. ಸರಿ ಚೇಂಜ್ ಹೇಗೆ ಮಾಡ್ಸೋದು!!. ಸೀದಾ ಮೇಲಿನ ಪಂಡಿತರ ಅಂಗಡಿಗೆ ಹೋಗಿ ೪೦ ಪೈಸೆಯ ೨ ಲೆಡ್ ತಗೊಂಡ್ ೧೦೦ ರುಪಾಯಿ ಕೊಟ್ಟೆ. ಪಂಡಿತರಿಗೆ ಆಗ್ಲೇ ಅನುಮಾನ ಬಂದಂಗಿತ್ತು(ಸಾಸಿವೆ ಕಾಳಿನ ವಾಸನೆ ಬಹುಶ ಇನ್ನ ಇತ್ತೇನು!!).ಚೇಂಜ್ ತಗಂಡು ಸೈಕಲ್ ತಗಂಡು ಸೀದಾ ಗ್ರೌಂಡ್ ಕಡೆ ಹೋಗಿ ಇಬ್ರು ತಿರಗಾಡಿ ನಾಳೆ ಎಲ್ಲೆಲ್ಲಿ ಹೋಗೋದು ಸೈಕಲ್ ಅಲಿ ಅಂತ ತೀರ್ಮಾನ ಮಾಡಿಆಯ್ತು, ಕುಶಿಲಿ ಮನೆ ಕಡೆ ಹೊರಟ್ವಿ....
ಇನ್ನೇನು ಮನೆ ಒಳಗೆ ಹೋಗ್ಬೇಕು, ಅಮ್ಮ ಬೆತ್ತ ಹಿಡ್ಕಂಡ್ ಬಾಗ್ಲ ಸಂದಿ ಇರದು ಆಗ್ಲೇ ಕಾಣ್ತು(ಪಂಡಿತರು ಆಗ್ಲೇ ವಿಷ್ಯ ಮುಟ್ಟಿಸಿ ಆಗಿತ್ತು), ಓಡಿ ಹೋಗ ಬೇಕು ಅನೋ ಹೊತ್ಗೆ ಹಿಡ್ಕಂಡ್ಹೊರಗಡೆ ಎಲ್ಲ ಬೆರ್ಸಿ ಬೆರ್ಸಿ ಪೆಟ್ಗಳು ಬಿದ್ವು...ಕೊನೆಗೆ ನಾಗರತ್ನಮ್ಮ ಬಂದು ಬಿಡ್ಸಿದ್ ಆಯಿತು ...

ಒಂದೊಂದ್ ಸಾರಿ ಯಾವಗ್ಲಾದ್ರೂ ಸಣ್ಣ ಮಕ್ಳು ಸೈಕಲ್ ಹೊಡ್ಕೊಂಡ್ ಹೋಗದನ ನೋಡಿದಾಗ, ಆ ಮೊದಲ ಸರಿ ತಿಂದ ಪೆಟ್ಟು ನೆನ್ಪಾಗುತ್ತೆ...
ಅವತ್ತೇ ಕೊನೆ ಅನ್ಸುತೆ, ಬಾಡಿಗೆ ಸೈಕಲ್ ಹೊಡೆದಿದ್ದು...(ಕದ್ದಿದ್ದೂ ಕೂಡ:)).