ವಸಂತ
ಇದಾವ ಲೋಕವಿದು, ಕನಸೋ? ನನಸೋ? ಒಂದೂ ತಿಳಿಯದು..ಮಾಗಿಯಲಿ ಚಿಗುರ ಬಯಸಿದ ನಾನೆಂತ ಮೂರ್ಖ!!
ನನ್ನೆದೆ ನಿತ್ಯ ಹರಿದ್ವರ್ಣವಲ್ಲ ಗೆಳತಿ,
ನೋಡು ನೀನಿಲ್ಲದೆ ಮನದಿಂದ ಒಂದೊಂದೇ ಕನಸುದುರಿ ಬರಡಾಗಿಹುದಲ್ಲ ಒಣಗಿ..
ಅದೆಷ್ಟು ಆಳವಾಗಿ ಬೆರೂರಿದ್ದಿ ನೀ..
ಈಗೇಕೆ ಹೀಗೆ..
ಹರಿವ ನೀರಲ್ಲಿ ಕಲರವವಿಲ್ಲ, ಕೋಗಿಲೆಯ ದನಿಯಲಿ ಇಂಪಿಲ್ಲ...
ಅದರೇನು ಕಣ್ಣೀರ ಬಿಸಿಉಸಿರ ನಿನ್ನ ಕಾಣಿಕೆ ಇದೆಯಲ್ಲ..
ನನಗಿನ್ನು ವಸಂತದ ಕನಸೂ ಇಲ್ಲ..
ವಾಸ್ತವದಿ ನೀ ದೂರವಿರಬಹುದು...
ನನ್ನ ಪ್ರೇಮಕೆ ಎದೆಯಲೊಂದು ಸಾಮ್ರಾಜ್ಯ ಸೃಷ್ಟಿಸುವೆ, ಕನಸುಗಳ ಕಾವಲಿಡುವೆ...
ವರುಷ ವರುಷಗಳೇ ಉರುಳಲಿ,
ಕಳೆದ ವಸಂತದ ನೆನಪಲ್ಲೇ ಕಾಲವನು ದೂಡುವೆ......
----------------------------
ಹುಚ್ಚು
ಶುರುವಾಯಿತೆಂದರೆ ಪ್ರೇಮ,ಮನಸು ನಿಲ್ಲದು ಅದೇ ನಿಯಮ..
ಕಣ್ಣು ಎಲ್ಲೋ ನೋಡಿದರೆ ಮನವೆಲ್ಲೋ ಸುತ್ತುವುದು...
ಪ್ರತಿ ಎದೆ ಬಡಿತವು ಅವಳ ನೆನಪನೆ ತಂದು,
ಕಣ್ಣು ಬಿಟ್ಟೆ ಪ್ರೇಮನಿದ್ದೆಯ ಕಲಿಸುವುದು..
ಪ್ರೇಮಲತಾ ಮಂಟಪದ ತಂಗಾಳಿ ಹಿಡಿಸುವುದು ತಡೆಯಲಾಗದ ಚಳಿ..
ಪ್ರೇಮವೊಂದು ಸಾಗರ, ಹೆಜ್ಜೆ ಹೆಜ್ಜೆಗೂ ಆಳ ಹೆಚ್ಚು..
ಆಗಲೇ ತಿಳಿಯಿತು ನನಗೆ, ಇದು ವಾಸಿಯಾಗದ `ಹುಚ್ಚು`..
----------------------------
ಮಹಡಿ
ಕನಸೆಂಬುದು ಕನ್ನಡಿ..ಮುಖವು ಮನಸಿನ ಮುನ್ನುಡಿ...
ನನ್ನ ಕನಸಿನಲಿ ನಿನ್ನೊಂದಿಗೆ ನನಗೆ ಪಾತ್ರವಿದೆ..
ನಿನ್ನ ಮನಸಿನಲಿ ಅದೇಕೆ ನಾನಿಲ್ಲದೇ ಹೋದೆ?..
ತಿಳಿಯದೆ ಅಕ್ರಮಿಸಿಕೊಂಡೆ ನೀ ನನ್ನೆದೆಯ ಪ್ರತಿ ಕೋಣೆ...
ಆಗಲೇ ಶುರುವಾಗಿದ್ದು ವಾಸ್ತವಕ್ಕೂ, ಭಾವನೆಗಳಿಗೂ ಹಣಾಹಣಿ...
ಕೊನೆಗೂ ಗೆದ್ದವು ಭಾವನೆಗಳು ವಿಪರೀತ ಹೋರಾಡಿ...
ಅದರೇನು, ಏರದಾದೆನೆ ಆ ನಿನ್ನ ಮನಸ್ಸೆಂಬ `ಬಹು ಮೆಟ್ಟಿಲುಗಳ ಮಹಡಿ`
----------------------------
ಆಟ
ಮನಸಿನ ಸಂತೆಯಲಿ ಕನಸುಗಳ ಮಾರಾಟ...
ಕೊಂಡಿದ್ದು ನೀನು, ಕಳೆದದ್ದು ನಾನು.
ಬಳ್ಳಿಯ ಆಸರೆಗಾಗಿ ಮರದ ಹುಡುಕಾಟ...
ಬಯಸಿದೆ ನಾನು, ವರವಾದೆ ನೀನು.
ಕೊಟ್ಟು ಪಡೆವ ಈ ಆಟದಲಿ...
ಮೊದಲು ಸೋತಿದ್ದು ನೀನೋ? ನಾನೋ?.
----------------------------
ನೆನಪು...
ಆಗೊಮ್ಮೆ ಈಗೊಮ್ಮೆ ಆಗಸದಲಿ ಕಂಡು ಮಾಯವಾಗುವ ಅದ್ರುಷ್ಟದ, ಚುಕ್ಕಿಗಾಗಿ
ಇರುಳೆಲ್ಲ ಕಾದು ಕೂತ ನೆನಪು...
ಹೂವಿಂದ ಹೂವಿಗೆ ಹಾರುತ ಕೈಗೆಟುಕದ, ಚಿಟ್ಟೆಗಾಗಿ
ದಿನವೆಲ್ಲ ತಡಕಾಡಿದ ನೆನಪು...
ಬೆಲೆಕಟ್ಟಲಾಗದ, ಕಳೆದುಹೋದ ಬಣ್ಣದ ಬುಗುರಿಗಾಗಿ
ಜಗವೆಲ್ಲ ಹುಡುಕಾಡಿದ ನೆನಪು...
-ಶಿವ
----------------------------
ಕವಿತೆಗಳು ನನಗೆ ದೂರ. ಓದಿದೆ . ಚನ್ನಾಗಿವೆ
ಪ್ರತ್ಯುತ್ತರಅಳಿಸಿ