ಗುರುವಾರ, ಫೆಬ್ರವರಿ 4, 2010

ಮೊದಲ ಪೆಟ್ಟು..



ಇದು ನನ್ನ ಮೊದಲನೇ ಪೋಸ್ಟ್ ಅದ್ಕೆ ಸ್ವಲ್ಪ ಏರು ಪೇರು ಇರ್ಬೋದು ಬರವಣಿಗೇಲಿ...ಓಕೆ,
ನನ್ ಬ್ಲಾಗ್ ಹೆಸರು ''ನಾನು ನನ್ನ ಊರು ಮತ್ತು ನನ್ನ ಜನ'' ಅದ್ಕೆ ಮೊದ್ಲು ನಾ ನನ್ ಕಥೆ ಇಂದ ಸ್ಟಾರ್ಟ್ ಮಾಡ್ತಿನಿ ಆಮೇಲೆ, ನಮ್ ಊರು ನಮ್ ಜನಗಳ ಕಡೆ ಹೋಗೋಣ...:)






ಬಹುಶ ಎಲ್ಲರ ಜೀವನದಲ್ಲೂ ತಮ್ಮ ತಮ್ಮ ಮೊದಲ ಅನುಭವಗಳನ್ನ ಮರೆಯೋಲ್ಲ, ಆಗಾಗ ಮೆಲ್ಕ್ ಹಾಕ್ತ ಇರ್ತಾರೆ ಅಂದ್ಕೋತೀನಿ..
ಹಾಗೆ ಇದು ನಾನು ಮೊದಲ್ ಸಾರಿ ಪೆಟ್ಟು ತಿಂದ ಕತೆ.(ಇದ್ಕೂ ಮೊದ್ಲು ಸಣ್ಣ ಪುಟ್ಟ ಏಟ್ ತಿಂದಿರ್ಬೋದು ಆದ್ರೆ ಅವುಗಳಲ್ಲಿ ಅಂತದ್ದೇನು ವಿಶೇಷತೆ ಇಲ್ಲ:)) .

ಅವತ್ತು ಮೊದಲ ದಿನ, ಅಷ್ಟು ಚೆನಾಗಿದ್ದ ಜುಟ್ಟು ಬೇಡ ಬೇಡ ಅಂದ್ರು ಕತ್ತರ್ಸಿ ಬಿಟ್ರು, ಇಲ್ಲ ಅಂದ್ರೆ ನಿಂಗೆ ಕಮಾನ್ ಕಟ್ಟಿಂಗ್(ಸುತ್ತ ಬೋಳಿಸಿ ನೆತ್ತಿಲಿ ಜುಟ್ಟು) ಮಾಡ್ಸ್ತೀನಿ ಅಂತ ಬೆದರಿಕೆ ಬೇರೆ. ಸರಿ, ಅಮ್ಮ ಪೂಜೆ ಮಾಡಿ, ದೇವರ ಮುಂದೆ ಕೂರ್ಸಿ ಕುಂಕುಮ ಎಲ್ಲ ಏರ್ಸಿ, ಹಾಲು ಕೊಟ್ಟು, ಹೊಸ ಅಂಗಿ ಚಡ್ಡಿ ಎಲ್ಲ ಆಯಿತು, ಏನಕ್ಕೆ ಅಂತ ಗೊತಾಗ್ಲಿಲ್ಲ, ಬಹುಶ ಯಾರೋ ನೆಂಟರ ರ ಮನಗೆ ಅಂತ ತಿಲ್ಕಂಡ್ ಕುಷಿಲೆ ಇದ್ದೆ , ಆದ್ರೆ ದಾರೀಲಿ ಪೋಸ್ಟ್ ಮ್ಯಾನ್ ಕಿಟ್ಟಣ್ಣ, ಎಲ್ಲಿಗೆ ಹೊರಟ್ರಿ ಜಯಲಕ್ಷ್ಮಮ ಅಂತ ಕೇಳ್ದಾಗ, ಇಲ್ಲೇ ಮಗನ್ನ ಶಾಲೆಗೆ ಸೇರ್ಸಕೆ ಅಂತ ಹೇಳಿದಾಗ್ಲೆ ಗೊತಾಗಿದ್ದು, ಓಹೋ ನಾನು ಹರಕೆಯ ಕುರಿ ಆಗಿದ್ದು, ಅದ್ಕೆ ಹಾಲು ಕುಂಕುಮ ಎಲ್ಲ ಅಂತ. ಹೆಂಗೋ ಆಟ ಆಡ್ಕೊಂಡ್ ಅರಾಮಗೆ ಇದ್ದೆ ಈ ಶಾಲೆ ಟೀಚರ್ ಪೆಟ್ಟು ಎಲ್ಲ ಯಾಕಪ್ಪ ಅಂತ ನಂದು, ದಾರಿಲೇ ಸುಮಾರು ಐಡಿಯಾ ಬಂದವು, ಹೆಂಗಾರೆ ಇದ್ರಿಂದ ತಪ್ಸ್ಕಂಬೇಕು ಅಂತ. ಇನ್ನ ಶಾಲೆಗೆ ಸೇರ್ಸಕೆ ಹೋದಾಗ ಅಲ್ಲಿ ಮೋಹಿನಿ ಟೀಚರ್ ಒಬ್ನಿಗೆ ಹೊಡಿಯೋದನ್ನ ನೋಡಿ ಹೃದಯಾನೆ ಒಡೆದ್ ಹೋಯ್ತು, ಅವ್ರೆ ನಮ್ಮ ಕ್ಲಾಸ್ ಟೀಚೆರ್ ಅಂತೆ!! ಅಯ್ಯೋ ಮುಗಿತು ಕತೆ ನಂದು ಅಂದ್ಕಂಡೆ; ಸರಿ ಅಡ್ಮಿಶನ್ ಎಲ್ಲ ಮುಗಿತು, ಕ್ಲಾಸ್ ಅಲ್ಲಿ ಕೂರ್ಸಿ ಅಮ್ಮ ಮನೆಗೆ ಹೋದರು. ಮನೆ ಗೆ ಮೆಟ್ಲು ಇಳ್ದು ಇನ್ನೇನು ಬಾಗ್ಲು ತಗಿಬೇಕು ಅಮ್ಮ ಶಾಕ್ ನಾನ್ ಅಲ್ಲಿ ಹಾಜರ್!!!(ಅಮ್ಮ ಮೇಲಿನ ರೋಡಿಂದ ಹೋಗೋದನ್ನ ನೋಡ್ಕಂಡ್, ಕೆಳಗಿನ ರೋಡ್ ಇಂದ ಒಂದೇ ಓಟದಲಿ ಮನೆ ಸೇರಿದ್ದೇ).ಉಫ್ಫ್ ಆದ್ರು ಬಿಡ್ಬೇಕ ಪಕ್ಕದ್ ಮನೆ ಫಿಲಿಪನ ಸಹಾಯ ತಗಂಡ್ ಮತ್ತೆ ಶಾಲೆಗೆ ತಂದ್ ಕೂರ್ಸೆ ಬಿಟ್ರು.

ಹೀಗೆ ನನ್ನ ಶಾಲೆಯ ದಿನ ಸ್ಟಾರ್ಟ್ ಆಯಿತು, ಮನಸಿಲ್ಲದ ಮನಸಲಿ, ದಿನ ಶಾಲೆ ಅದೇನೋ ಜೈಲಿನ ಅನುಭವ!!! ಹೀಗಿರ್ವಾಗ ಶಾಲೆ ಮೇಲೆ ಇಷ್ಟ ಅಗಕೆ ಶುರುವಾಗಿದ್ದು ಲೆನಿನ್ ಗೆಳೆತನ ಆದಮೇಲೆ(ಅದ್ಯಾಕೆ ಅವ್ನ ಹೆಸರು ಹಂಗೆ ಅಂತ ಗೊತ್ತಿಲ್ಲ, ಬಹುಶ ಅವರ ಅಪ್ಪ ಪಕ್ಕ ಕಾಮ್ಮುನಿಸ್ಟ್ ಇದ್ದಿರ್ಬೋದು:)), ಹಾಗೆ ಬರ್ತಾ ಬರ್ತಾ ಗೆಳೆತನ ಜಾಸ್ತಿ ಆಯಿತು, ಶಾಲೆಗೆ ೮ ಗಂಟೆಗೆ ರೆಡಿ!!

ಆಗ ೪ ನೆ ಕ್ಲಾಸ್ ಇರ್ಬೋದೆನ, ಸೈಕಲ್ ಹೊಡೆಯೋ ಹುಚ್ಚು, ತಂದ ಪೂರ್ತಿ ಗೋಲಿನ ಬೆಳ್ಗೆ ಸೆಶನ್ ಅಲ್ಲೇ ಸೋತ ಲೆನಿನ್ ರೊಚ್ಚಿಗೆದ್ದು ಸೈಕಲ್ ಶಾಪ್ಗೆ ಹೋಗಿ ಕಬ್ನದ ಡಾಮ ಗೋಲಿ ತಂದು ಸಂಜೆ ಪೂರ್ತಿ ನಿನ್ನ ಗೋಲಿನ ಪುಡಿ ಮಾಡ್ಲಿಲ್ಲ ಅಂದ್ರೆ ನನ್ ಹೆಸ್ರುನ ತಗ್ದು ನಾಯಿಗೆ ಇಡು ಅಂತ (!!!) ಶಪತ ಮಾಡಿ ಹೋದವ ಅದ್ಯಾಕೋ ಹ್ಯಾಪ್ ಮೊರೆ ಹಾಕಂಡ್ ಬಂದ...ಏನು ಅಂತ ವಿಚಾರಿಸಿದರೆ ಆಗ ಗೊತಾಯ್ತು ಬಾಡ್ಗೆ ಸೈಕಲ್ ಗಂಟೆಗೆ ೫೦ ಪೈಸೆ ಇದ್ದಿದುನ ಒಂದೇ ಸರಿ ಸೈಕಲ್ ಶಾಪ್ ರಾಜಣ್ಣ ೧ ರೂಪಾಯಿಗೆ ಏರಿಸಿಬಿಟ್ಟಿದಾನೆ ಅಂತ....ಈಗ ಏನ್ ಮಾಡದು ಮನೇಲಿ ಕಷ್ಟ ಪಟ್ಟು ೧ ತಿಂಗಳು striike ಮಾಡಿ ಹೇಗೋ ಅಮ್ಮನ ಹತ್ರ ದಿನಕೆ ೫೦ ಪೈಸೆ ಅಪ್ಪಂಗೆ ಗೊತ್ಆಗ್ದಂಗೆ ಇಸ್ಕೊಂಡ್ ಬರೋದು, ೧ ರುಪಾಯಿ ಕೇಳಿದ್ರೆ ನಾಳೆ ಇಂದ ಸೈಕಲ್ ಇಲ್ಲ!!. ಆಕಾಶನೇ ತಲೆ ಮೇಲೆ ಬಿದ್ದಂಗೆ ಆಯಿತು. ಸರಿ ಇಬ್ರು ಸೇರಿ ರಾಜಣ್ಣನ ಹತ್ರ ಹೋಗಿ ನಾವು ದಿನ ಬರ್ತಿವಿ ಅಲ ನಮಗೆ ಮಾತ್ರ ಹಳೆ ರೇಟ್ ಗೆ ಕೊಡ್ಬೇಕು ಅಂತ ಎಸ್ಟ್ ಕೇಳಿದ್ರು ಅಸಾಮಿ ಒಪ್ಲಿಲ್ಲ. ಪೆಚ್ಚು ಮೊರೆ ಹಾಕ್ಕಂಡ್ ಇಬ್ರು ಮನಗೆ ಹೋದ್ವಿ. ಲೆನಿನ್ಗೆ ಈ ತಲೆಬಿಸಿಲಿ ಬೆಳ್ಗೆ ಮಾಡಿದ ಶಪತನೆ ಮರ್ತೋಯ್ತು, ಇಬ್ರು ಸಂಜೆ ಊಟ ಮಾಡಿ ಇವಿನಿಂಗ್ ಮೀಟಿಂಗ್ ಪಾಯಿಂಟ್ ಹತ್ರ ಕೂತ್ವಿ.
ಆ ವಿಟ್ಲ ಮತ್ತೆ ಆ ಪೈ ಪ್ರಕಾಶ್ ನಮ್ ಮುಂದೇನೆ ಬೆಲ್ ಮಾಡ್ಕಂಡ್ ಆಚೆ ಇಚೆ ರೌಂಡ್ ಹೋಗ್ತಾ ಇದ್ರೆ ಮೈ ಎಲ್ಲ ಉರಿಯದು. ಹಾಗೆ ೨-೩ ದಿನ ಆಯಿತು ಸೈಕಲ್ ಹೊಡೆಯದೆ.

ಸರಿ ಕೊನೆಗೆ ಒಂದ್ ತೀರ್ಮಾನಕ್ಕೆ ಬಂದ್ವಿ ಈ ೧ - ೨ ರುಪಾಯಿ ಬದ್ಲು ಒಟ್ಟಿಗೆ ಹೆಂಗಾರೆ ಒಂದ್ ೫೦- ೧೦೦ ರುಪಾಯಿ ಸಿಕ್ಬಿಟ್ರೆ ೧-೨ ತಿಂಗಳಿಗೆ ಚಿಂತೆ ಇಲ್ಲ. ಆದ್ರೆ ೧೦೦ ರು ಅಂದ್ರೆ ಹುಡ್ಗಾಟನ ಎಲ್ಲಿಂದ ತರೋದು. ಬೆಂಗಳುರಿಂದ ಮಾವನಾರು ಬಂದ್ರೆ ವಾಪಾಸ್ ಹೋಗೋವಾಗ ೫೦-೧೦೦ ರುಪಾಯಿ ಸಿಗುತ್ತೆ( ಒಂದೊಂದು ಸಾರಿ ಅವರು ಮರೆಯೋ ಚಾನ್ಸ್ ಇರುತೆ, ಆಗ ಅವ್ರ ಬ್ಯಾಗ್ ತಗಂಡು ಬಸ್ ಸ್ಟಾಪ್ ತನಕ ಹೋಗ್ಬೇಕು), ಆದ್ರೆ ದೀಪಾವಳಿಗೆ ಇನ್ನ ೨ ತಿಂಗಳು ಇದೆ ಮಾವ ಬರಕೆ. ಅವ ಆಗಲೇ ನಾನ್ ತರ್ತೀನಿ ಅಂತ ಘೋಷಣೆ ಮಾಡ್ಬಿತ್ತಿದಾನೆ. ಈಗ ನಾ ಎಲ್ಲಿಂದ ತರೋದು..ರಾತ್ರಿ ಎಲ್ಲ ಅದೇ ತಲೇಲಿ , ಎಡಕೆ ತಿರುಗಿದರೆ ೧೦೦ ರುಪಾಯಿ ನೋಟು ,ಬಲ್ಗಡೆ ತಿರುಗಿದ್ರೆ ಆ ವಿಟ್ಲ ಮತ್ತೆ ಪೈಪ್ರಕಾಶ್ ಬೆಲ್ ಮಾಡ್ಕಂಡ್ ಹೋದಂಗೆ...

ಮಾರನೆ ದಿನ ಬೆಳಗೆ ಯಾಕೋ ಶಾಲೆಗೆ ಹೋಗಕೆ ಮನಸೆ ಇಲ್ಲ, ಹೊರಗಡೆ ಇಂದ ಸೀಟಿ ಸಿಗ್ನಲ್, ಒಹ್ ಆಗಲೇ ಲೆನಿನ್ ಹಾಜರ್, ಸರಿ ಬೇಗ ಬೇಗ, ಸಾನ, ತಿಂಡಿ ಮುಗ್ಸಿ ಬ್ಯಾಗ್ ಹಾಕಂಡ್ ಹೊರಟೆ. ಅವ ಬಾರಿ ಕುಶಿ ಇದ್ದಂಗೆ ಕಾಣ್ತಾನೆ, ಹತ್ರ ಹೋದಕೂಡಲೇ ಕಾಣ್ತು ೧೦೦ ರುಪಾಯಿ ನೋಟ್ನ ಹಂಗೆ ಜೋಬಲ್ಲಿ ಚೂರು ಕಾಣೋ ಹಾಗೆ (ನಂಗೆ ತೋರ್ಸಕೆ ) ಇಟ್ಟಿದಾನೆ.
ಇನ್ನು ನಾನೇನು ಮಾಡೋದು ಅಂತ ಯೋಚನೆ ಹಿಡಿತು..ಅದೇ ಯೋಚನೆಲಿ ಅವತ್ತು ೮ ಗೋಲಿ!! ಬೇರೆ ಕಳಕೊಂಡೆ ಅವನ್ ಜೊತೆ ಆಟದಲ್ಲಿ.
ಸರಿ ಸಂಜೆ ಆಯಿತು, ದಾರಿಲಿ ಬರ್ತಾ ರಾಜಣ್ಣನ ಶಾಪ್ ಕಡೆ ಬೇಡ ಬೇಡ ಅಂದ್ರು ಕಣ್ಣು ಆ ಕಡೆನೇ ಸೆಳೆತ ,ಕೆಂಪ್ ಕಲರ್ 'ಬುಲ್ಲೆಟ್ ಸೈಕಲ್' ಕಣ್ ಕುಕ್ತ ಇತ್ತು ,ಮನೆಗೆ ಹೋಗಿ ಕೈ ಕಾಲ್ ಮುಖ ತೊಳೆದು ಊಟ ಮಾಡಿ(ಸಂಜೆ ಶಾಲೆ ಇಂದ ಬಂದ್ರ ಮೇಲೆ ಊಟ ಮಾಡೋ ಪದ್ದತಿ) ಹೊರಗಡೆ ಹೋಗಲೇ ಬಾರ್ದು ಅಂತ ತೀರ್ಮಾನ ಮಾಡಿಯಾಯ್ತು. ಆದ್ರೆ ಕಿಟಕಿ ಕಡೆ ನೋಡಿದ್ರೆ ಲೆನಿನ್ ಆಗ್ಲೇ ವಿಟ್ಲ ಮತ್ತೆ ಪೈ ಜೊತೆ ಸೇರಿ ಸೈಕಲ್ ಹೊಡಿತ ಇದಾನೆ!! ಅವನು ಅವ್ರ ಪಾರ್ಟಿ ಸೇರಿಬಿಟ್ರೆ ಏನ್ ಕತೆ..ಇನ್ನ ಸುಮ್ನೆ ಕೂತರೆ ಅಗದಿಲ್ಲ ಏನರೆ ಮಾಡಬೇಕು ಅಂತ ಆವತ್ ರಾತ್ರಿ ಎಲ್ಲ ಸ್ಕೆಚ್ ಹಾಕಿಯಾಯ್ತು. ಕೊನೆಗೆ ಕಣ್ಣಿಗೆ ಬಿದ್ದಿದ್ದು ಅಮ್ಮನ 'ಸಾಸಿವೆ ಕಾಳಿನ ಡಬ್ಬಿ'(cum ದುಡ್ಡಿನ ಬಾಕ್ಸ್ )!!!.
ಸರಿ ಡಿಸೈಡ್ ಮಾಡಿಯಾಯ್ತು ಅದ್ಕೆ ಕೈ ಹಾಕದು ಅಂತ, ಆದ್ರೆ ಅದು ಅಷ್ಟೊಂದು ಸುಲ್ಬದಲಿ ಇಲ್ಲ, ಎತ್ರದಲಿ ಬೇರೆ ಇದೆ, ಅಮ್ಮ ಇಲ್ಲದಾಗ್ಲೆ ಸರಿ ಈ ಕೆಲಸ ಆಗದು, ಏನ್ ಮಾಡದು ಅಂತ ಯೋಚನೆ ಮಾಡೋ ಅಷ್ಟೊತ್ಗೆ, ಪಕ್ಕದ ನಾಗರತ್ನಮ್ಮ ನಾಳೆ ಶುಕ್ರವಾರ ನಮ್ ಮನೆಗೆ ಅರಶಿನ ಕುಂಕುಮ ಇಟ್ಕೊಂಡ್ ಹೋಗಕೆ ಬರ್ರಿ ಅಂತ ಕಿಟ್ಕಿಲಿ ಅಮ್ಮಂಗೆ ಮೆಸೇಜ್ ಕೊಟ್ಟಿದ್ದು ಕಿವಿಗೆ ಬಿತ್ತು. ಸರಿ ನಾಳೆ ಸಂಜೆ ಡಬ್ಬಿಗೆ ಕೈ ಹಾಕದು ಅಂತ ಮುಹೂರ್ತ ಇಟ್ಟಾಯ್ತು...

ಶಾಲೆ ಇಂದ ಬಂದ್ ಅಮ್ಮ ಹೋಗದನ್ನೇ ಕಾದು, ಕುರ್ಚಿ ಮೇಲೆ ಕುರ್ಚಿ ಇಟ್ಟು ಡಬ್ಬಿಗೆ ಕೈ ಹಾಕೆ ಬಿಟ್ಟೆ, ಒಳಗೆ ಗರಿ ಗರಿ ೧೦೦ ರುಪಾಯಿ!!! ಹಂಗೆ ಜೋಬಿಗೆ ಹಾಕಂಡ್, ಡಬ್ಬಿ, ಕುರ್ಚಿ ಎಲ್ಲ ಇದ್ದ ಜಾಗದಲ್ಲೇ ಅನುಮಾನ ಬರ್ದಿದಂಗೆ ಇಟ್ಟು ಸೀದಾ ಲೆನಿನ್ ಮನೆ ಹತ್ರ ಓಟ....
ಒಂದೇ ಸಿಗ್ನಲ್ಗೆ ಹೊರ ಬಂದ..ಕತೆ ಎಲ್ಲ ಹೇಳಾಯ್ತು ಅವಂಗೆ , ಈ ೧೦೦ ರೂಪಾಯ್ನ ಡೈರೆಕ್ಟಾಗಿ ರಾಜಣ್ಣನ ಹತ್ರ ಕೊಡಬೇಡ , ಅವ್ನ ಹತ್ರ ಚೇಂಜ್ ಇರಲ್ಲ ನಾಳೆ ಇಸ್ಕೊ ಅಂತ ಹೇಳ್ತಾನೆ. ಅದ್ಕೆ ಚೇಂಜ್ ಮಾಡಿ ೫, ೧೦ ಇಟ್ಕೋ ಜೋಬಲ್ಲಿ ಉಳ್ಕಿದುನ ಎಲ್ಲಾದ್ರೂ ಕದ್ದಿಡು ಅಂತ ಸಜೆಶನ್ ಕೊಟ್ಟ. ಸರಿ ಚೇಂಜ್ ಹೇಗೆ ಮಾಡ್ಸೋದು!!. ಸೀದಾ ಮೇಲಿನ ಪಂಡಿತರ ಅಂಗಡಿಗೆ ಹೋಗಿ ೪೦ ಪೈಸೆಯ ೨ ಲೆಡ್ ತಗೊಂಡ್ ೧೦೦ ರುಪಾಯಿ ಕೊಟ್ಟೆ. ಪಂಡಿತರಿಗೆ ಆಗ್ಲೇ ಅನುಮಾನ ಬಂದಂಗಿತ್ತು(ಸಾಸಿವೆ ಕಾಳಿನ ವಾಸನೆ ಬಹುಶ ಇನ್ನ ಇತ್ತೇನು!!).ಚೇಂಜ್ ತಗಂಡು ಸೈಕಲ್ ತಗಂಡು ಸೀದಾ ಗ್ರೌಂಡ್ ಕಡೆ ಹೋಗಿ ಇಬ್ರು ತಿರಗಾಡಿ ನಾಳೆ ಎಲ್ಲೆಲ್ಲಿ ಹೋಗೋದು ಸೈಕಲ್ ಅಲಿ ಅಂತ ತೀರ್ಮಾನ ಮಾಡಿಆಯ್ತು, ಕುಶಿಲಿ ಮನೆ ಕಡೆ ಹೊರಟ್ವಿ....
ಇನ್ನೇನು ಮನೆ ಒಳಗೆ ಹೋಗ್ಬೇಕು, ಅಮ್ಮ ಬೆತ್ತ ಹಿಡ್ಕಂಡ್ ಬಾಗ್ಲ ಸಂದಿ ಇರದು ಆಗ್ಲೇ ಕಾಣ್ತು(ಪಂಡಿತರು ಆಗ್ಲೇ ವಿಷ್ಯ ಮುಟ್ಟಿಸಿ ಆಗಿತ್ತು), ಓಡಿ ಹೋಗ ಬೇಕು ಅನೋ ಹೊತ್ಗೆ ಹಿಡ್ಕಂಡ್ಹೊರಗಡೆ ಎಲ್ಲ ಬೆರ್ಸಿ ಬೆರ್ಸಿ ಪೆಟ್ಗಳು ಬಿದ್ವು...ಕೊನೆಗೆ ನಾಗರತ್ನಮ್ಮ ಬಂದು ಬಿಡ್ಸಿದ್ ಆಯಿತು ...

ಒಂದೊಂದ್ ಸಾರಿ ಯಾವಗ್ಲಾದ್ರೂ ಸಣ್ಣ ಮಕ್ಳು ಸೈಕಲ್ ಹೊಡ್ಕೊಂಡ್ ಹೋಗದನ ನೋಡಿದಾಗ, ಆ ಮೊದಲ ಸರಿ ತಿಂದ ಪೆಟ್ಟು ನೆನ್ಪಾಗುತ್ತೆ...
ಅವತ್ತೇ ಕೊನೆ ಅನ್ಸುತೆ, ಬಾಡಿಗೆ ಸೈಕಲ್ ಹೊಡೆದಿದ್ದು...(ಕದ್ದಿದ್ದೂ ಕೂಡ:)).

5 ಕಾಮೆಂಟ್‌ಗಳು:

  1. ಬರಹ ತುಂಬಾ ಚೆನ್ನಾಗಿದೆ. ಸ್ಕ್ರಿಪ್ಟ್ ರೆಡಿ ಇದ್ರೆ ಫಿಲಂ ಶೂಟ್ ಸ್ಟಾರ್ಟ್ ಮಾಡೋಣ, ಹೆಸರು "ಮೈ ಬ್ಲಾಗ್". ಕಥೆಯ ನಾಯಕ ಶಿವ ಪ್ರಸಾದ್. ನಾಯಕಿ ಆ ಸೈಕಲ್ ಹಿಂದ್ಗಡೆ ಕೂತುಕೊಂಡಿರೋ ಹುಡುಗಿ. ಅವಳ ಹೆಸರು ಏನು ?

    ಪ್ರತ್ಯುತ್ತರಅಳಿಸಿ
  2. ನಿಜಕ್ಕೂ ಚನ್ನಾಗಿದೆ.
    "ಅಮ್ಮ ಮೆಟ್ಟಿಲು ಕೆಳಗಿಳಿದು ಬಾಗಿಲ ಬಳಿ ಬಂದಾಗ ನಾನು ಅಲ್ಲಿದ್ದೆ"-ಕೆಲವರಿಗೆ ಅರ್ಥವಾಗಲಿಕ್ಕಿಲ್ಲ. ಶಿವನ ಮನೆ ಇರುವುದು ರಸ್ತೆಯಿಂದ ಸ್ವಲ್ಪ ಕೆಳಗೆ. ಕೆಲವು ಮೆಟ್ಟಿಲು ಇಳಿದು ಹೋದರೆ ಮುಂಬಾಗಿಲು ಸಿಗುತ್ತೆ

    ಪ್ರತ್ಯುತ್ತರಅಳಿಸಿ
  3. ಶಿವಾ, ಇದು ನಿನ್ನ ಮೊದಲ ಬರವಣಿಗೆ ಅಂತ ಅನ್ನಿಸೋಲ್ಲ. ನೀನು ಮೊದಲೇ ವಿಜ್ಞಾನಿ ಬರವಣಿಗೆಯ ಫಾರ್ಮುಲ ಏನಾದ್ರೂ ಕಂಡು ಹಿಡಿದಿರುವೆಯ?
    ಇರಲಿ ನಿನ್ನ ಸೈಕಲ್ ಕಥೆ ಮತ್ತೆ ಕಳ್ಳತನದ ಕಥೆ (ನಿನ್ನ ಅನುಭವ) ಚೆನ್ನಾಗಿದೆ. ಭಾಗಾಷ್ಯ ಎಲ್ಲರ ಜೀವನದಲ್ಲಿ ನಡೆದಿರ ಬಹುದಾದ ಪ್ರಸಂಗ.
    ಒಳ್ಳೆಯ ಬರವಣಿಗೆಗಳು ಬರಲಿ.
    ಹ್ಯಾಪಿ ಬ್ಲಾಗಿಂಗ್.

    ಪ್ರತ್ಯುತ್ತರಅಳಿಸಿ
  4. ಸವಿ ಸವಿ ನೆನಪು, ಸಾವಿರ ನೆನಪು, ಬಾಲ್ಯದ ನೆನಪುಗಳ ಮಧುರ ಮೆಲುಕು, ತು೦ಬಾ ಚೆನ್ನಾಗಿದೆ, ಮುಂದುವರಿಸಿ

    ಪ್ರತ್ಯುತ್ತರಅಳಿಸಿ